ಕೇಂದ್ರ ಸರರ್ಕಾರದ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಏಜೆನ್ಸಿಯು (NWDA) ವಿವಿಧ ಹುದ್ದೆಗಳ ನೇಮಕಾತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ನೇಮಕಾತಿ ಹುದ್ದೆಗಳ ಬಗ್ಗೆ ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಜೂನಿಯರ್ ಎಂಜಿನಿಯರ್ (ಸಿವಿಲ್), ಜೂನಿಯರ್ ಅಕೌಂಟ್ಸ್ ಆಫೀಸರ್, ಅಪ್ಪರ್ ಡಿವಿಷನ್ ಕ್ಲರ್ಕ್, ಹಿಂದಿ ಟ್ರಾನ್ಸ್ಲೇಟರ್, ಸ್ಟೆನೋಗ್ರಾಫರ್ ಗ್ರೇಡ್-2, ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಜೂನ್ 25 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿ ಅರ್ಜಿ ಸಲ್ಲಿಸಬೇಕು.
ಹುದ್ದೆಗಳ ವಿವರ
ಜೂನಿಯರ್ ಎಂಜಿನಿಯರ್ (ಸಿವಿಲ್)-16
ಹಿಂದಿ ಟ್ರಾನ್ಸ್ಲೇಟರ್ – 01
ಜೂನಿಯರ್ ಅಕೌಂಟ್ಸ್ ಆಫೀಸರ್ – 05
ಅಪ್ಪರ್ ಡಿವಿಷನ್ ಕ್ಲರ್ಕ್- 12
ಸ್ಟೆನೋಗ್ರಾಫರ್ ಗ್ರೇಡ್-2 – 05
ಲೋವರ್ ಡಿವಿಷನ್ ಕ್ಲರ್ಕ್- 23
The National Water Development Agency (NWDA) recruitment- 2021
ವಯೋಮಿತಿ ಅರ್ಹತೆಗಳು
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತಿ ಇರುವವರು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಇದರ ಜತೆಗೆ ಇಲ್ಲಿನ ಹುದ್ದೆಗಳಿಗೆ ಅನುಗುಣವಾಗಿ ಗರಿಷ್ಠ ವಯೋಮಿತಿ ಹೊಂದು ಅವಕಾಶ ಇದೆ. ಅಂದರೆ, 25/ 30/ 27 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಹರಿಗೆ ವಯೋಮಿತಿ ಸಡಿಲಿಕೆ ಸಹ ಇದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಜಲಾನಯನ ಅಭಿವೃದ್ಧಿ ಏಜೆನ್ಸಿಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಬಹುದು.
ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 840 ರೂ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಅಂಗವಿಕಲ / ಮಹಿಳಾ ಅಭ್ಯರ್ಥಿಗಳಿಗೆ 500 ರೂ.
ಆನ್‌ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನ: 25-06-2021
ಕಂಪ್ಯೂಟರ್ ಪರೀಕ್ಷೆ ದಿನಾಂಕ : ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುತ್ತದೆ.
ಉದ್ಯೋಗ | ಅರ್ಜಿ ಸಲ್ಲಿಸಿ |
---|---|
ಸರ್ಕಾರಿ ಉದ್ಯೋಗ | Click Hear |
ಖಾಸಗಿ ಉದ್ಯೋಗ | Click Hear |
ಗುತ್ತಿಗೆ ಉದ್ಯೋಗ | Click Hear |
ಪೊಲೀಸ್ | Click Hear |
SSLC ಉದ್ಯೋಗ | Click Hear |
PUC ಉದ್ಯೋಗ | Click Hear |
ITI ಉದ್ಯೋಗ | Click Hear |