ಕೇಂದ್ರ ಸರಕಾರದ ಅಧೀನದಲ್ಲಿರುವ ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿಮಿಟೆಡ್ ನಲ್ಲಿ ನಾನ್ ಎಕ್ಸಿಕ್ಯುಟಿವ್ ಬರೋಬ್ಬರಿ 1388 ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
8 ನೇ ತರಗತಿ, ಎಸ್‌ಎಸ್‌ಸಿ ಅಥವಾ ತತ್ಸಮಾನ 10 ನೇ ತರಗತಿ, ಎನ್‌ಟಿಸಿ, ಎನ್‌ಎಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಹಾಕಬಹುದು.
ಮೆಕ್ಯಾನಿಕ್, ಅಟೆಂಡೆAಟ್, ಕಾರ್ಪೆಂಟರ್, ವೆಲ್ಡರ್ಸ್, ಎಲೆಕ್ಟಿçಶಿಯನ್, ಫಿಟ್ಟರ್, ಗ್ಯಾಸ್ ಕಟರ್, ಪೇಂಟರ್, ಪೈಪ್ ಫಿಟ್ಟರ್, ಸ್ಟೋರ್ ಕೀಪರ್ ಸೇರಿ ಒಟ್ಟು ವಿವಿಧ 24 ಮಾದರಿಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಬೇಕಾದ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ನೇಮಕಾತಿ ಬಗೆಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಳ್ಳಬೇಕು. ಬಳಿಕ ಅರ್ಜಿ ಸಲ್ಲಿಸಿ.
ವಯೋಮಿತಿ:
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜೂನ್ 1, 2021ರ ಅನ್ವಯ ಕನಿಷ್ಟ 18 ವರ್ಷ ಆಗಿರಬೇಕು. ಗರಿಷ್ಟ 38 ವರ್ಷ ಒಳಗಿರಬೇಕು. ಇದರ ಜತೆಗೆ ಅಭ್ಯರ್ಥಿಗಳಿಗೆ ವರ್ಗವಾರು ವಯೋಮಿತಿ ಸಡಿಲಿಕೆಯನ್ನು ನಿಯಮಾನುಸಾರ ನೀಡಲಾಗುತ್ತದೆ.
ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿ ಸಡಿಲಿಕೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 05 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಶೇ. 40 ರಷ್ಟು ಅಂಗವೈಕಲ್ಯ ಹೊಂದಿರುವ ಅಭ್ಯರ್ಥಿಗಳಿಗೆ 10 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆ ಅವಕಾಶ ಇದೆ.
ವೇತನ:
ನಾನ್ ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 17,000 ರೂ. ರಿಂದ 64,360 ರೂ.ಗಳ ವರೆಗೆ ವೇತನ ನೀಡಲಾಗುತ್ತದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಆರಂಭಿಕ ವೇತನದಲ್ಲಿ ವ್ಯತ್ಯಾಸ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?:
ಈ ಹುದ್ದೆಗಳಿಗೆ ಟ್ರೇಡ್ ಪರೀಕ್ಷೆ, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100/- ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ/ ಅಂಗವಿಕಲ/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ. ಇವರು ಅರ್ಜಿ ಶುಲ್ಕವನ್ನು ಪಾವತಿಸುವಂತಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮಜಗಾನ್ ಡಾಕ್ ಶಿಪ್‌ಬ್ಯುಲ್ಡರ್ಸ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿಂದ Careers >> Online Recruitment >> Non-Executive ಅಲ್ಲಿ ಅಕೌಂಟ್ ಕ್ರಿಯೇಟ್ ಮಾಡಬೇಕು. ಯೂಸರ್ ನೇಮ್, ಪಾಸವರ್ಡ್ ಕ್ರಿಯೇಟ್ ಮಾಡಿದ ಬಳಿಕ ಅಲ್ಲಿನ ಕೇಳಲಾದ ಮಾಹಿತಿ ಭರ್ತಿ ಮಾಡಿ ಕೊನೆಗೆ ಸಬ್ಮಿಟ್ ಮಾಡಬೇಕು.
ಉದ್ಯೋಗ | ಅರ್ಜಿ ಸಲ್ಲಿಸಿ |
---|---|
ಸರ್ಕಾರಿ ಉದ್ಯೋಗ | Click Hear |
ಖಾಸಗಿ ಉದ್ಯೋಗ | Click Hear |
ಗುತ್ತಿಗೆ ಉದ್ಯೋಗ | Click Hear |
ಪೊಲೀಸ್ | Click Hear |
SSLC ಉದ್ಯೋಗ | Click Hear |
PUC ಉದ್ಯೋಗ | Click Hear |
ITI ಉದ್ಯೋಗ | Click Hear |