PDO Recruitment 2023. ಕರ್ನಾಟಕ ಸರ್ಕಾರವು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳನ್ನು ನೇಮಕ ಮಾಡುವ ಸಂಬAಧ ನೇಮಕಾತಿ ವಿಧಾನದ ಅಂತಿಮ ಆದೇಶವನ್ನು ಹೊರಡಿಸಿದೆ. ಕಳೆದ ತಿಂಗಳು ಅಂದರೆ, ಮಾರ್ಚ್ 29 ರಂದು ಆದೇಶ ಹೊರಡಿಸಲಾಗಿದೆ. ಅಭ್ಯರ್ಥಿಗಳಿಗೆ ನೇಮಕಾತಿಗೆ ಸಂಬAಧಿಸಿದ ಪೂರ್ಣ ಮಾಹಿತಿ ಇಲ್ಲಿದೆ.
ಗ್ರೂಪ್ ಸಿ ವೃಂದದ 1500 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ವೇತನ ಶ್ರೇಣಿಯನ್ನು ಈಗ 40900-78200 ರೂ. (ಗ್ರೂಪ್ ಬಿ ಕಿರಿಯ ವೃಂದ) ಉನ್ನತೀಕರಿಸಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂದು ಮರು ನಾಮಕರಿಸಲಾಗಿದೆ. ಹಾಗಾಗಿ ಪಿಡಿಒ ಆಗುವ ಗುರಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಮಹತ್ವದ ವಿಷಯವಾಗಿದೆ.
ಇಲ್ಲಿ ಒತ್ತಿ: ಉದ್ಯೋಗ ಮಾಹಿತಿ 🔴 Website Link ➠ https://karnatakavarte.in/
ಜತೆಗೆ ರಾಜ್ಯದ ಉಳಿದ 4521 ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ 37000-70,850 ರೂ. (ಗ್ರೂಪ್ ಸಿ ವೃಂದದಲ್ಲಿ) ಮುಂದುವರೆಸಲಾಗಿದೆ.
ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳಿಗೆ ಪ್ರತ್ಯೇಕವಾಗಿ ನೇಮಕಾತಿ ವಿಧಾನವನ್ನು ಹೊರಡಿಸುವ ಕುರಿತು ಸರ್ಕಾರದ ಪ್ರಕಟಣೆ ತಿಳಿಸಿದೆ.
ಹಾಗಾಗಿ ಕರ್ನಾಟಕ ಸರ್ಕಾರವು ಸದ್ಯದಲ್ಲಿಯೇ ಖಾಲಿ ಇರುವ ಪಿಡಿಒ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಪಿಡಿಒ ಹುದ್ದೆಗಳಿಗೆ ಅರ್ಹತೆಗಳೇನು ? ವೇತನ ಎಷ್ಟು? ಪರೀಕ್ಷೆ ಮಾದರಿ ಹೇಗಿರುತ್ತದೆ? ಎನ್ನುವ ವಿವರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆಸಕ್ತರು ಪೂರ್ತಿಯಾಗಿ ಓದಿ ಪಿಡಿಒ ನೇಮಕಾತಿಗೆ ಸಿದ್ಧತೆ ಮಾಡಿಕೊಳ್ಳಬಹುದು.
ವಿದ್ಯಾರ್ಹತೆ ಏನು?
ರಾಜ್ಯದ ಯಾವುದೇ ಅಧಿಕೃತ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ನೇಮಕಾತಿ ಅಧಿಸೂಚನೆ ಹೊರಡಿಸಿದಾಗ ಪದವ ಅಂತಿಮ ವರ್ಷ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಹಾಕಲು ಅವಕಾಶ ಇರುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಅರ್ಜಿ ಹಾಕಿ: ಸಹಕಾರ ಸಂಘಗಳ ಒಕ್ಕೂಟ ನೇಮಕಾತಿ- 2023
ವಯಸ್ಸಿನ ಅರ್ಹತೆಗಳೇನು?
ಪಿಡಿಒ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿ ಮಾಡಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿಗೆ ವರ್ಗವಾರು ಗರಿಷ್ಠ ವಯಸ್ಸು ನಿಗದಿ ಮಾಡಲಾಗುತ್ತದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ/ ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ವಯೋಮಿತಿ ಇರುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ ಹೇಗಿರುತ್ತದೆ?
ಪಿಡಿಒ ಹುದ್ದೆಗಳಿಗೆ ಸಾಮಾನ್ಯವಾಗಿ ಒಟ್ಟು 400 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ. ಪತ್ರಿಕೆ-1ರ ಪರೀಕ್ಷೆ 200 ಅಂಕಗಳಿಗೆ ಇರುತ್ತದೆ. ಅದರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಸಾಮಾನ್ಯ ಜ್ಞಾನ ಕುರಿತ 100 ಪ್ರಶ್ನೆಗಳು ಇರಲಿದೆ.
ಪತ್ರಿಕೆ-2ರ ಪರೀಕ್ಷೆ ಕೂಡ 200 ಅಂಕಗಳಿಗೆ ಇರುತ್ತದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಷಯಕ್ಕೆ ಸಂಬAಧಿಸಿದ 100 ಪ್ರಶ್ನೆಗಳು ಇರುತ್ತವೆ. ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಎರಡೂ ಪತ್ರಿಕೆ ಪರೀಕ್ಷೆಗಳು ತಲಾ 2 ಗಂಟೆ ಅವಧಿ ಇರುತ್ತದೆ. ಪ್ರಶ್ನೆಗಳು ವಸ್ತುನಿಷ್ಠ ಬಹು ಆಯ್ಕೆ ಆಗಿರುತ್ತವೆ.
ಅರ್ಜಿ ಹಾಕಿ: ಲೆಕ್ಕಪತ್ರ ಇಲಾಖೆ ನೇಮಕಾತಿ- 2023
ಅರ್ಜಿ ಸಲ್ಲಿಸಿ | Click hear |
ಜಿಲ್ಲೆಗಳ ಖಾಲಿ ಹುದ್ದೆಗಳು | ನಿಮ್ಮ ಜಿಲ್ಲೆ ಆಯ್ಕೆ ಮಾಡಿ |
ಬ್ಯಾಂಕ್ ಉದ್ಯೋಗ | Apply now >> |
ರೈಲ್ವೆ ಉದ್ಯೋಗ | Apply now >> |
ಕಂಪನಿ ಉದ್ಯೋಗ | Apply now >> |
ವೇತನ ಶ್ರೇಣಿ ಎಷ್ಟು?
ಗ್ರೂಪ್ ಸಿ ವೃಂದದ ಪಿಡಿಒ ಹುದ್ದೆಗೆ ವೇತನ ಶ್ರೇಣಿ: 37000-70,850 ರೂ.
ಗ್ರೂಪ್ ಬಿ ಕಿರಿಯ ವೃಂದದ ಹಿರಿಯ ಪಿಡಿಒ ಹುದ್ದೆಗೆ ವೇತನ ಶ್ರೇಣಿ 40900-78200 ರೂ.
ಪಿಂಚಣಿ ಸೌಲಭ್ಯ ಕೂಡ ನೀಡಲಾಗುತ್ತದೆ.