ಗ್ರಾಮ ಪಂಚಾಯತಿಗಳಲ್ಲಿ ಗ್ರಾಮ ಕಾಯಕ ಮಿತ್ರರನ್ನು ಗೌರವಧನದ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಭ್ಯರ್ಥಿಗಳು ಅರ್ಜಿಯನ್ನು ತಮ್ಮ ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು. 10ನೇ ತರಗತಿಯಲ್ಲಿ ಗಳಿಸಿದ ಶೇಕಡವಾರು ಅಂಕಗಳಲ್ಲಿ ಶೇ. 50 ರಷ್ಟನ್ನು ಪರಿಗಣಿಸುವುದು. ಗ್ರಾಮ ಕಾಯಕ ಮಿತ್ರರಿಗೆ ಮಾಸಿಕ 6೦೦೦ ರೂ. ಮಾಸಿಕ ನಿಗದಿತ ಗೌರವಧನ ನೀಡಲಾಗುವುದು.
ಅವರ ಕಾರ್ಯನಿರ್ವಹಣೆಯನ್ನು ಆಧರಿಸಿ 5೦೦೦ ರೂ. ವರೆಗೆ ಪ್ರೋತ್ಸಾಹಧನ ಪಡೆಯಬಹುದಾಗಿದೆ. ಪ್ರೋತ್ಸಾಹ ಧನದ ವಿವರಣೆಯನ್ನು ನೇಮಕಾತಿ ನಂತರ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿಲಾಗಿದೆ.
ಅರ್ಹತೆಗಳು:
ಈ ಹುದ್ದೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು, ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು. ಆಭ್ಯರ್ಥಿಯು ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್ ಕಾರ್ಡ ಹೊಂದಿರಬೇಕು. ಆಭ್ಯರ್ಥಿಯು ಕಳೆದ 3 ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
ವಯೋಮಿತಿ 45 ವರ್ಷ ಮೀರಬಾರದು. ಆಭ್ಯರ್ಥಿಗೆ ಓದು, ಬರಹ ಚೆನ್ನಾಗಿ ತಿಳಿದಿರಬೇಕು. ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ :
ಹಾಯಕ ನಿರ್ದೇಶಕರು (ಗ್ರಾ.ಉ) ತಾಲ್ಲೂಕ ಪಂಚಾಯತ ಔರಾದ(ಬಿ) ಮೊ.9845846445, ಕಮಲನಗರ ಮೊ.9900876414, ಬಸವಕಲ್ಯಾಣ ಮೊ.9731254117, ಹುಲಸೂರ ಮೊ.9900272780, ಭಾಲ್ಕಿ ಮೊ.9448035296, ಬೀದರ ಮೊ.9663949166, ಹುಮನಾಬಾದ ಮೊ.8105475039, ಚಿಟಗುಪ್ಪಾ ಮೊ. 9739085273 ಕ್ಕೆ ಸಂಪರ್ಕಿಸಹುದಾಗಿದೆ ಎಂದು ಬೀದರ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಹೀರಾ ನಸೀಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಲು ಜೂನ್ 23ರ ಸಂಜೆ 5.30 ಗಂಟೆಯವರೆಗೆ ಮಾತ್ರ ಅವಕಾಶ ಇರುತ್ತದೆ. ನಂತರ ಬಂದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.
ಇತರ ಸರ್ಕಾರಿ ಉದ್ಯೋಗಗಳು
ಉದ್ಯೋಗ | ಅರ್ಜಿ ಸಲ್ಲಿಸಿ |
---|---|
ಸರ್ಕಾರಿ ಉದ್ಯೋಗ | Click Hear |
ಖಾಸಗಿ ಉದ್ಯೋಗ | Click Hear |
ಗುತ್ತಿಗೆ ಉದ್ಯೋಗ | Click Hear |
ಪೊಲೀಸ್ | Click Hear |
SSLC ಉದ್ಯೋಗ | Click Hear |
PUC ಉದ್ಯೋಗ | Click Hear |
ITI ಉದ್ಯೋಗ | Click Hear |