February 3, 2023

MSIL ಜನೌಷಧಿ ಕೇಂದ್ರದಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ

ಕರ್ನಾಟಕ ಸರ್ಕಾರದ ಅಧೀನದ ಮೈಸೂರು ಸೇಲ್ಸ್ ಇಂಟರ್ನಾಷನಲ್ ಲಿಮಿಟೆಡ್ (ಎಂಎಸ್ಐಎಲ್) ರಾಜ್ಯಾದ್ಯಂತ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ನಡೆಸುತ್ತಿದೆ. ಈ ಕೇಂದ್ರಗಳಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತಿದೆ. ಎಂಎಸ್ಐಎಲ್ ನಡೆಸುತ್ತಿರುವ ಜನೌಷಧಿ ಕೇಂದ್ರಗಳಲ್ಲಿ ಕೆಲಸ ಮಾಡಲು ಆಸಕ್ತರನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿ ಸರಿಯಾಗಿ ಓದಿಕೊಂಡು ಎಂಎಸ್ಐಎಲ್ ನಿಗದಿತ ಮೊಬೈಲ್ ನಂಬರ್ ಗೆ ಕರೆ ಮಾಡಬೇಕು.

ಅರ್ಜಿ ಸಲ್ಲಿಸಿ: ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶ

ನೇಮಕಾತಿ ವಿವರ

ನೇಮಕಾತಿ ಸಂಸ್ಥೆ- ಎಂಎಸ್ಐಎಲ್

ಹುದ್ದೆಯ ಹೆಸರು- ಫಾರ್ಮಸಿಸ್ಟ್

ವೇತನ- ತಿಂಗಳಿಗೆ 15 ಸಾವಿರ ರೂ ಮತ್ತು ಪ್ರೋತ್ಸಾಹಧನ.

ಕೆಲಸದ ಸಮಯ- ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ.

ಅರ್ಜಿ ಸಲ್ಲಿಸಿ: ನರೇಗಾ ಯೋಜನೆಯಡಿ ನೇಮಕಾತಿ

ವಿದ್ಯಾರ್ಹತೆ:

ಮೈಸೂರು ಸೇಲ್ಸ್ ಇಂಟರ್ನಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನ ಜನೌಷಧಿ ಕೇಂದ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಫಾರ್ಮಸಿಷ್ಟ್ ಪದವಿ ಹೊಂದಿರಬೇಕು.

ಎಲ್ಲೆಲ್ಲಿ ನೇಮಕಾತಿ:

ಬೆಂಗಳೂರು ನಗರದ ಕೆ.ಆರ್.ಪುರಂ ನ ತಾಲೂಕು ಸಾರ್ವಜನಿಕ ಆಸ್ಪತ್ರೆ. ರಾಮನಗರ ಜಿಲ್ಲೆಯ ಕನಕಪುರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಮಾಗಡಿಯಲ್ಲಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಜನೌಷಧಿ ಕೇಂದ್ರದಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಅರ್ಜಿ ಆಹ್ವಾನ: ಕೆಪಿಎಸ್ ಸಿ ಇಂದ ಬಿ, ಸಿ ದರ್ಜೆ ಹುದ್ದೆಗಳಿಗೆ ನೇಮಕಾತಿ

ಅರ್ಜಿ ಸಲ್ಲಿಸುವುದು ಹೇಗೆ?

ಮೈಸೂರು ಸೇಲ್ಸ್ ಇಂಟರ್ನಾಷನಲ್ ಲಿಮಿಟೆಡ್ (ಎಂಎಸ್ಐಎಲ್) ನ ಜನೌಷಧಿ ಕೇಂದ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು ಫಾರ್ಮಸಿಷ್ಟ್ ನೇಮಕಾತಿಗೆ ಯಾವುದೇ ಅರ್ಜಿ ಕರೆದಿಲ್ಲ. ಆಸಕ್ತರು ಕೂಡಲೇ ಮೊಬೈಲ್ ಸಂಖ್ಯೆ 7259172522, 9591919191 ಗೆ ಕರೆ ಮಾಡಬೇಕು.

Leave a Reply

Your email address will not be published. Required fields are marked *