Share

ರಾಜ್ಯಾದ್ಯಂತ ಆರಂಭವಾಗುತ್ತಿರುವ ವಿಜಯಪುರ ಜಿಲ್ಲೆಯ ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತದ ನೂತನ ಶಾಖೆಯಲ್ಲಿ ಕೆಲಸ ಮಾಡಲು 187 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್ಸೆಸ್ಸೆಲ್ಸಿ, ಪದವಿ ವಿದ್ಯಾರ್ಹತೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬೇಕು.

ಹುದ್ದೆಗಳ ವಿವರ

ನೇಮಕಾತಿ ಸಂಸ್ಥೆ- ಸಿದ್ಧಗಿರಿ ಸೌಹಾರ್ಧ ಸಹಕಾರಿ ನಿ.
ಹುದ್ದೆಗಳ ಸಂಖ್ಯೆ– 187
ಕೆಲಸದ ಸ್ಥಳ– ಕರ್ನಾಟಕದ ವಿವಿಧ ಜಿಲ್ಲೆಗಳು
ಅರ್ಜಿ ಮಾದರಿ– ಅಂಚೆ ಮೂಲಕ ಅರ್ಜಿ ಸಲ್ಲಿಸಬೇಕು.
ವಯಸ್ಸಿನ ಮಿತಿ– 19 ರಿಂದ 50 ವರ್ಷ
ವಿದ್ಯಾರ್ಹತೆ- ಎಸ್ಸೆಸ್ಸೆಲ್ಸಿ, ಐಟಿಐ, ಪದವಿ

ಖಾಲಿ ಹುದ್ದೆಗಳು
ಆಂತರಿಕ ಲೆಕ್ಕ ಪರಿಶೋಧಕರು- 05
ಮಾನವ ಸಂಪನ್ಮೂಲ ಅಧಿಕಾರಿ- 02
ಸಾಲ ಹಾಗೂ ಮುಂಗಡ ವಿಭಾಗ ಅಧಿಕಾರಿಗಳು- 05
ಹಿರಿಯ ಅಧಿಕಾರಿ- 50
ಕಿರಿಯ ಅಧಿಕಾರಿಗಳು- 50
ಮಾರಾಟ ಅಧಿಕಾರಿಗಳು –05
ಜನೌಷಧಿ ಕೇಂದ್ರ ವಿತರಕರು- 05
ಸಿದ್ಧಸಿರಿ ಕೋಲ್ಡ್ ಸ್ಟೋರೇಜ್- 05
ಸಿದ್ಧಸಿರಿ ಕೃಷಿ ಸೇವಾ ಕೇಂದ್ರ- 05
ಇಲೆಕ್ಟ್ರಿಶಿಯನ್- 05
ವಾಹನ ಚಾಲಕರು/ಸಿಪಾಯಿ- 50
(ಹೆಚ್ಚಿನ ಮಾಹಿತಿಗೆ ನೇಮಕಾತಿ ಪ್ರಕಟಣೆ ನೋಡಬಹುದು.)

ವಯೋಮಿತಿ

ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಕನಿಷ್ಠ 19 ವರ್ಷದಿಂದ ಗರಿಷ್ಠ 50 ವರ್ಷದ ವರೆಗೆ ವಯೋಮಿತಿ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಹಾಗಾಗಿ ಅಭ್ಯರ್ಥಿಗಳು ನೇಮಕಾತಿ ಪ್ರಕಟಣೆಯ ಮಾಹಿತಿ ನೋಡಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಸ್ವ ವಿವರವುಳ್ಳ ಸಂಪೂರ್ಣ ಮಾಹಿತಿಯ ಭಾವಚಿತ್ರವುಳ್ಳ ರೆಸುಮ್ ಕಳುಹಿಸಬೇಕು.
200 ರೂ. ಮೊತ್ತದ ಡಿಡಿಯನ್ನು SIDDHASIRI SOUHARDA SAHAKARI LTD. VIJAYAPUR ಈ ಹೆಸರಿನಲ್ಲಿ ಸಂದಾಯ ಮಾಡಬೇಕು. ಅಥವಾ ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತದಲ್ಲಿ ಹಣ ಜಮಾ ಮಾಡಿದ ರಶೀದಿಯನ್ನು ಪಡೆಯಬೇಕು.
ಅರ್ಜಿಯೊಂದಿಗೆ ಮೂಲ ದಾಖಲೆ ಲಗತ್ತಿಸಬಾರದು. ಕೇವಲ ನಕಲು ಪ್ರತಿಗಳನ್ನು ಮಾತ್ರ ಲಗತ್ತಿಸಬೇಕು.
ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಅರ್ಜಿ ಸಲ್ಲಿಸುವ ವಿಳಾಸ:

ಸಿದ್ಧಸಿರಿ ಸೌಹಾರ್ಧ ಸಹಕಾರಿ ನಿಯಮಿತ, ವಿಜಯಪುರ ಆಡಳಿತ ಕಚೇರಿ, ಸಿದ್ದೇಶ್ವರ ದೇವಾಲಯ ಆವರಣ, ಸಿದ್ದೇಶ್ವರ ಮುಖ್ಯ ರಸ್ತೆ, ವಿಜಯಪುರ- 586101.

ಮುಖ್ಯ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ:16-9-2020
ಅರ್ಜಿ ಸಲ್ಲಿಸಲು ಕೊನೆ ದಿನ:05-10-2020

Share