Share

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ (ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಡಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. GIS, NRM, Livelihodd (CFP) ಪರಿಣಿತರ ಹುದ್ದೆಗೆ ಹೊರಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಲಾಗುತ್ತಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಸರಿಯಾಗಿ ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ

ಬ್ಲಾಕ್‌ GIS ಕೊ-ಆರ್ಡಿನೇಟರ್5
ಬ್ಲಾಕ್‌ NRM ಎಕ್ಸ್‌ಪರ್ಟ್‌16
ಬ್ಲಾಕ್‌ ಲೈವ್‌ಲಿಹುಡ್ ಎಕ್ಸ್‌ಪರ್ಟ್‌(ಅಗ್ರಿಕಲ್ಚರ್ ಅಂಡ್ ಅಲ್ಲೈಡ್)16

ವಿದ್ಯಾರ್ಹತೆ

ಜಿಐಎಸ್‌ ಹುದ್ದೆ- ಎಂ.ಟೆಕ್ / ಎಂಇ / ಎಂ.ಎಸ್ಸಿ ಜತೆಗೆ ಎರಡು ವರ್ಷ ಕಾರ್ಯಾನುಭವ.
ಬ್ಲಾಕ್‌ ಎನ್‌ಆರ್‌ಎಂ ಎಕ್ಸ್‌ಪರ್ಟ್‌ ಹುದ್ದೆ- ಬಿ.ಟೆಕ್ ಇನ್‌ ಸಿವಿಲ್‌ ಇಂಜಿನಿಯರಿಂಗ್ / ಅಗ್ರಿಕಲ್ಚರ್ ಎಂಜಿನಿಯರಿಂಗ್ / ಡಿಪ್ಲೊಮ ಇನ್ ಸಿವಿಲ್ ಎಂಜಿನಿಯರಿಂಗ್ ಮತ್ತು ಎರಡು ವರ್ಷ ಕಾರ್ಯಾನುಭವ.
ಬ್ಲಾಕ್‌ ಲೈವ್ಲಿಹುಡ್ ಎಕ್ಸ್‌ಪರ್ಟ್‌ ಹುದ್ದೆ- ಮಾಸ್ಟರ್ಸ್ ಇನ್‌ ಅಗ್ರಿಕಲ್ಚರ್ ಎಕನಾಮಿಕ್ / ಹಾರ್ಟಿಕಲ್ಚರ್ / ಆಗ್ರೋಫಾರೆಸ್ಟ್ರಿ / ಅಗ್ರೋನಮಿ / ಫಾರೆಸ್ಟ್ರಿ ವಿದ್ಯಾರ್ಹತೆ. ಎರಡು ವರ್ಷಗಳ ಕಾರ್ಯಾನುಭವ.

ವೇತನ:

ಜಿಐಎಸ್ ಹುದ್ದೆಗೆ ತಿಂಗಳಿಗೆ 35 ಸಾವಿರ ರೂ. ಹಾಗು ಇತರ ವಿಶೇಷ ಭತ್ಯೆ ನೀಡಲಾಗುತ್ತದೆ.
ಇತರ ಹುದ್ದೆಗಳಿಗೆ ತಿಂಗಳಿಗೆ 30 ಸಾವಿರ ರೂ. ಜತೆಗೆ ಭತ್ಯೆಗಳನ್ನು ನೀಡಲಾಗುತ್ತದೆ.

ವಯೋಮಿತಿ

ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಗರಿಷ್ಠ 45 ವರ್ಷಗಳನ್ನು ಮೀರಬಾರದು.

ನೇಮಕಾತಿ ವಿಧಾನ ಹೇಗಿರಲಿದೆ?

ಹುದ್ದೆಗಳಿಗೆ ನಗದಿ ಪಡಿಸಿದ ವಿದ್ಯಾರ್ಹತೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಮತ್ತು ಅನುಭವವುಳ್ಳ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ನೇರವಾಗಿ ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ನೇರ ನೇಮಕಾತಿ

ಆನ್‌ಲೈನ್‌ ಅರ್ಜಿ ಸಲ್ಲಿಸಲು ವೆಬ್‌ಸೈಟ್‌ ವಿಳಾಸ : www.mgnregakarnataka.com/jobs

ಆದೇಶ ಪ್ರತಿ ಓದಲು ಲಿಂಕ್ ಒತ್ತಿ Click Hear

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 21-09-2020

Share